ಇನ್ನು ಈ ಉಪ್ಪಿಟ್ಟನ್ನು ಹಲವು ರೀತಿ ಹಲವು ರುಚಿಯಲ್ಲಿ ಮಾಡಬಹುದು. ರವೆಯ ಮೂಲಕ ಬಟಾಣಿ ಹಾಕಿ ಮಾಡುವ ಉಪ್ಪಿಟ್ಟು ಇಂದಿಗೂ ಹೆಚ್ಚು ಚಾಲ್ತಿಯಲ್ಲಿದೆ. ಬಹುತೇಕರ ಮನೆಯಲ್ಲಿ ಗಡಿಬಿಡಿಯ ತಿಂಡಿಯಾಗಿ ಈ ಉಪ್ಪಿಟ್ಟು ಮಾಡಲ್ಪಡುತ್ತದೆ. ಸುಲಭವಾಗಿ ಕಡಿಮೆ ಸಮಯದಲ್ಲಿ ಈ ಉಪ್ಪಿಟ್ಟು ಮಾಡಬಹುದಾಗಿದೆ.
ಆದ್ರೆ ನೀವು ಎಂದಾದ್ರೂ ಗೋಧಿಯಿಂದ ಉಪ್ಪಿಟ್ಟು ಮಾಡಿದ್ದೀರಾ? ಗೋಧಿ ನುಚ್ಚಿನಲ್ಲಿ ರುಚಿ ರುಚಿಯ ಬೊಂಬಾಟ್ ಉಪ್ಪಿಟ್ಟು ಮಾಡಬಹುದು. ಕೆಲವು ಭಾಗದಲ್ಲಿ ಈ ಉಪ್ಪಿಟ್ಟು ಸಿಕ್ಕಾಪಟ್ಟೆ ಫೇಮಸ್ ಆಗಿದೆ. ಇದು ಆರೋಗ್ಯದ ದೃಷ್ಟಿಯಿಂದ ಬಹಳ ಉತ್ತಮ ಖಾದ್ಯವಾಗಿದೆ.
ಹಾಗಾದ್ರೆ ನಾವಿಂದು ಈ ಗೋಧಿ ನುಚ್ಚಿನ ಉಪ್ಪಿಟ್ಟು ಮಾಡುವುದು ಹೇಗೆ? ಈ ಉಪ್ಪಿಟ್ಟು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಈ ಉಪ್ಪಿಟ್ಟು ಮಾಡಲು ಎಷ್ಟು ಸಮಯ ತೆಗೆದುಕೊಳ್ಳುತ್ತವೆ ಎಂಬ ಕುರಿತ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ.
ಬೇಕಾಗುವ ಸಾಮಾಗ್ರಿ:
ಗೋಧಿ ನುಚ್ಚು- 1/2 ಕಪ್
ಸಾಸಿವೆ - 1/2 ಟೀಸ್ಪೂನ್
ಕಡಲೆ ಬೇಳೆ - 1/2 tbs
ಉದ್ದಿನಬೇಳೆ - 1/2 tbs
ನೆಲಗಡಲೆ - 1 tbs
ಈರುಳ್ಳಿ-1
ಬಟಾಣಿ - 5
ಟೊಮೆಟೊ - 1
ಕ್ಯಾರೆಟ್-1
ಶುಂಠಿ-1 ಇಂಚು
ಹಸಿರು ಮೆಣಸಿನಕಾಯಿ - 5
ಆಲೂಗಡ್ಡೆ-1
ಕರಿಬೇವಿನ ಎಲೆಗಳು - 2 tbs
ಕೊತ್ತಂಬರಿ ಸೊಪ್ಪು - 2 tbs
ನೀರು (1/2 ಕಪ್) - 3
ಅಡುಗೆ ಎಣ್ಣೆ
ರುಚಿಗೆ ಉಪ್ಪು
ಬಳಿಕ ಇದಕ್ಕೆ ಹುರಿದುಕೊಂಡ ಗೋಧಿ ನುಚ್ಚನ್ನು ಹಾಕಿಕೊಂಡು ಮಿಕ್ಸ್ ಮಾಡಿ. ಬಳಿಕ ಅಳತೆಯ ಪ್ರಕಾರ ಒಂದಕ್ಕೆ ಎರಡು ಕಪ್ನಂತೆ ನೀರು ಹಾಕಿ ಜೊತೆಗೆ 1 ಕಪ್ ನೀರು ಜಾಸ್ತಿ ಹಾಕಿಕೊಳ್ಳಿ. 1 ಕಪ್ ಗೋಧಿಗೆ 3 ಕಪ್ ನೀರು ಹಾಕಬೇಕು.
ನೀರು ಹಾಕಿ ಕುದಿಯುತ್ತಿರುವಾಗ ಮಿಕ್ಸ್ ಮಾಡಿ ಮುಚ್ಚಳ ಹಾಕಿ 1 ಸೀಟಿ ಹೊಡೆಯಲು ಬಿಡಿ. ಇಷ್ಟಾದರೆ ನಿಮ್ಮ ಮುಂದೆ ಸವಿಯಲು ಗೋಧಿ ನುಚ್ಚಿನ ಉಪ್ಪಿಟ್ಟು ರೆಡಿಯಾಗಿರುತ್ತದೆ. ಇದಕ್ಕೆ ಚಟ್ನಿ ಜೊತೆ ಸವಿಯಬಹುದು. ಊಟದ ಬಾಕ್ಸ್ ಗೂ ಸಹ ಈ ಉಪ್ಪಿಟ್ಟು ಹಾಕಿಕೊಂಡು ಮಧ್ಯಾಹ್ನವು ಸಹ ಸವಿಯಬಹುದು.